ಸಾಕ್ಷಿ ಮಲಿಕ್‌ (ಜನನ: ೩ ಸೆಪ್ಟೆಂಬರ್ ೧೯೯೨) ೫೮ ಕೆ.ಜಿ ವಿಭಾಗದಲ್ಲಿ ಪೈಪೋಟಿ ಮಾಡುವ ಭಾರತೀಯ ಕುಸ್ತಿಪಟು. ರಿಯೋನಲ್ಲಿ ನಡೆದ ೨೦೧೬ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಇವರು ೫೮ ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟುಯಾಗಿದ್ದಾರೆ. ಅಲ್ಲದೇ, ಗ್ಲ್ಯಾಸ್ಗೋನಲ್ಲಿ ನೆಡೆದ ೨೦೧೪ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಮತ್ತು ದೊಹಾದಲ್ಲಿ ನೆಡೆದ ೨೦೧೫ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ ಕಂಚಿನ ಪದಕ ಗೆದ್ದಿದ್ದಾರೆ == ಬಾಲ್ಯ ಮತ್ತು ಆರಂಭಿಕ ತರಬೇತಿ == ಮಲಿಕ್ 3 ಸೆಪ್ಟೆಂಬರ್ 1992 ರಂದು ಹರ್ಯಾಣದ ರೋಹ್ಟಕ್ ಜಿಲ್ಲೆಯ ಮೋಖ್ರಾ ಗ್ರಾಮದಲ್ಲಿ, ದೆಹಲಿ ಸಾರಿಗೆ ನಿಗಮದ ಬಸ್ ವಾಹಕದ ಸುಖ್ಬಿರ್, ಮತ್ತು ಸ್ಥಳೀಯ ಆರೋಗ್ಯ ಚಿಕಿತ್ಸಾಲಯದ ಮೇಲ್ವಿಚಾರಕ ಸುದೇಶ್ ಮಲಿಕ್ ರವರಿಗೆ ಜನಿಸಿದರು. ಅವರ ತಂದೆಯ ಪ್ರಕಾರ, ಕುಸ್ತಿಪಟುಯಾಗಿದ್ದ ಅಜ್ಜ ಬದ್ಲು ರಾಮ್ ನವರಿಂದ ಕುಸ್ತಿಗೆ ಪ್ರೇರೇಪಣೆ ದೊರೆಯಿತು. ರೋಹಟಕ್ನ ಛೋಟು ರಾಮ್ ಕ್ರೀಡಾಂಗಣದ ಅಖಾಡಾದಲ್ಲಿ, ತರಬೇತುದಾರ ಈಶ್ವರ್ ದಾಹಿಯಾ ಅವರ ಕೆಳಗೆ 12 ನೇ ವಯಸ್ಸಿನಲ್ಲಿ ಅವರು ಕುಸ್ತಿಯಲ್ಲಿ ತರಬೇತಿ ಪ್ರಾರಂಭಿಸಿದರು. == ಕ್ರೀಡಾ ವೃತ್ತಿಜೀವನ == ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ವೃತ್ತಿಪರ ಕುಸ್ತಿಪಟುವಾಗಿ ಮಲಿಕ್ ಮೊದಲ ಯಶಸ್ಸು 2010 ರಲ್ಲಿ ಜೂನಿಯರ್ ವರ್ಲ್ಡ್ ಚಾಂಪಿಯನ್ಷಿಪ್ನಲ್ಲಿ ಬಂದಿದ್ದು, 58 ಕೆ.ಜಿ ಫ್ರೀಸ್ಟೈಲ್ ಸಮಾರಂಭದಲ್ಲಿ ಕಂಚಿನ ಪದಕ ಗೆದ್ದರು. ಡೇವ್ ಷುಲ್ಟ್ಜ್ ಅಂತರರಾಷ್ಟ್ರೀಯ ಪಂದ್ಯಾವಳಿ (2014) ಯಲ್ಲಿ, ಅವರು 60 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. === ೨೦೧೪ ಕಾಮನ್ವೆಲ್ತ್ ಗೇಮ್ಸ್ === ಮಲಿಕ್ ಅವರು ತಮ್ಮ ಕಾಮನ್ವೆಲ್ತ್ ಗೇಮ್ಸ್ ಅಭಿಯಾನವನ್ನು ಗ್ಲ್ಯಾಸ್ಗೋ, ಸ್ಕಾಟ್ಲೆಂಡ್ ನಲ್ಲಿ ಆರಂಭಿಸಿದರು, ಕ್ವಾರ್ಟರ್ಫೈನಲ್‌ನಲ್ಲಿ ಕ್ಯಾಮರೂನ್‌ನ (ಎಡ್ವಿಗ್ ಗೊನೊಏಯಿಯ ( ) ವಿರುದ್ಧ ಪಂದ್ಯವನ್ನು ೪-೦ ಅಂತರದಿಂದ ಗೆದ್ದರು. ಸೆಮಿಫೈನಲ್ನಲ್ಲಿ, ಅವರು ಕೆನಡಾದ ಬ್ರಾಕ್ಸ್‍ಟೊನ್( )ನ್ನು ೩-೧ ಅಂತರದಿಂದ ಸೋಲಿಸಿ ಕಾಮನ್ವೆಲ್ತ್ ಪದಕ ಖಾತ್ರಿಮಾಡಿಕೊಂಡರು. ಕೊನೆಯ ಪಂದ್ಯದಲ್ಲಿ ನೈಜೀರಿಯಾದ ಅಮಿನತ್‌ ಅಡೆನೇಯಿ ಅವರನ್ನು ಎದುರಿಸಿ ೪-೦ ಯಿಂದ ಸೋತರು === ೨೦೧೪ ವಿಶ್ವ ಕುಸ್ತಿ ಚಾಂಪಿಯನ್ಶಿಪ್ === ತಾಷ್ಕೆಂಟ್ ಉಜ್ಬೇಕಿಸ್ತಾನ್‌ನಲ್ಲಿ ನೆಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್‌ನಲ್ಲಿ ೧೦ ಸೆಪ್ಟೆಂಬರ್ ೨೦೧೪ರಂದು ಮಲಿಕ್ ಭಾಗವಹಿಸಿದರು, ೧೬ರ ಸುತ್ತಿನಲ್ಲಿ ಇವರು ಸೆನೆಗಲ್‌ನ ರನ್ನು ಎದುರಿಸಿದರು ಮತ್ತು ೪-೧ ಅಂತರದಿಂದ ಪಂದ್ಯವನ್ನು ಗೆದ್ದರು. ಫಿನ್ಲ್ಯಾಂಡ್‌ನ ಪೆಟ್ರಾ ಯಿಂದ ೧-೩ರ ಅಂತರದಿಂದ ಸೋತ್ತು ಪಂದ್ಯಾವಳಿಯಲ್ಲಿ ಹೊರಬಂದರು === ೨೦೧೫ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ === ೨೦೧೫ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್‌ನ್ನು ದೋಹಾ, ಕತಾರ್‌ನಲ್ಲಿ ಮೇ ತಿಂಗಳಿನಲ್ಲಿ ನಡೆಸಲಾಯಿತು.೯ ಮೇ ೨೦೧೫ ರಂದು, ೬೦ ಕೆ.ಜಿ. ವಿಭಾಗದಲ್ಲಿ, ಒಟ್ಟು ಐದು ಸುತ್ತುಗಳಲ್ಲಿ ಎರಡು ಸುತ್ತುಗಳಲ್ಲಿ ಹೋರಾಡಿ, ಮಲ್ಲಿಕ್ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಮೊದಲ ಸುತ್ತಿನಲ್ಲಿ, ಅವರು ಚೀನಾದ ಲುವೊ ಕಿಯಾನ್‍ಜಾನ್)( ) ಅವರನ್ನು ಎದುರಿಸಿದರು ಆದರೆ ತಪ್ಪು ತೀರ್ಪಿನಿಂದಾಗಿ ೪-೫ ರಿಂದ ಸೋತರು. ಅವರು‌ ಎರಡನೇ ಸುತ್ತಿನಲ್ಲಿ ಮಂಗೋಲಿಯಾದ ಮುಂಖ್ತುಯ ತುಂಗಲಾಗ್( )ರನ್ನು ತಮ್ಮ ಬಲವಾದ ಪ್ರದರ್ಶನದಿಂದ ೧೩-೦ ಯಿಂದ ಸೋಲಿಸಿದರು, ಮೂರನೇ ಸುತ್ತಿನಲ್ಲಿ ಜಪಾನ್‌ನ ಯೊಶಿಮಾ ಕಯಾಮಾ ( ) ವಿರುದ್ಧ ಸೋಲುವ ಮುನ್ನ, ನಾಲ್ಕನೇ ಸುತ್ತಿನಲ್ಲಿ ಕಝಾಕಿಸ್ತಾನ್‌ನ ಅಯಾಲಿಮ್ ಕಾಸಿಮೊವ( )ರನ್ನು ಸೋಲಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇವರು ತನ್ನ ತವರು ಹರ್ಯಾಣಗೆ ಹಿಂದಿರಿಗಿದಾಗ ಇವರಿಗೆ ಮತ್ತು ಇವರ ತರಬೇತುದಾರ ಈಶ್ವರ್ ದಹಿಯಾ ಅವರಿಗೆ ಛೋಟು ರಾಮ್ ಕ್ರೀಡಾಂಗಣದಲ್ಲಿ ಹೃತ್ಪೂರ್ವಕ ಸ್ವಾಗತ ಸಿಕ್ಕಿತು. === ೨೦೧೬ ರಿಯೋ ಒಲಿಂಪಿಕ್ಸ್ === ಮಲಿಕ್‌ರವರು ೫೮ ಕೆ.ಜಿ. ವಿಭಾಗದಲ್ಲಿ ಚೀನಾದ ಜಾಂಗ್ ಲಾನ್() ಅವರನ್ನು ಮೇ ೨೦೧೬ರ ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಸೋಲಿಸುವ ಮೂಲಕ ೨೦೧೬ಬೇಸಿಗೆ ಒಲಿಂಪಿಕ್ಸ್ ಅರ್ಹತೆ ಪದೆದರು. ಒಲಿಂಪಿಕ್ಸ್‌ನಲ್ಲಿ, ೩೨ರ ಸುತ್ತಿನಲ್ಲಿ ಸ್ವೀಡನ್‌ನ ಜೋಹಾನಾ ಮ್ಯಾಟ್ಸನ್ () ವಿರುದ್ಧ ಮತ್ತು ೧೬ರ ಸುತ್ತಿನಲ್ಲಿ ಮರಿಯಾನ ಚರ್ದಿವೇರ ( ) ವಿರುದ್ಧ ಗೆದ್ದರು. ಕ್ವಾರ್ಟರ್ಫೈನಲ್‌ನಲ್ಲಿ, ಅಂತಿಮ ಘಟ್ಟ ತಲುಪಿವ ಸ್ಪರ್ಧಿಯಾದ, ರಶಿಯಾದ ವಲೆರಿಯಾ ಕೊಬ್ಲೊವಾ ವಿರುದ್ಧ ಸೋತು ರೆಫೆಶಾಝ್ ಸುತ್ತಿಗೆ ಅರ್ಹರಾದರು, ಅವರ ಮೊದಲ ರೆಫೆಶಾಝ್ ಸುತ್ತಿನಲ್ಲಿ ಮಂಗೋಲಿಯಾದ ಓರ್ಕಾನ್​ ಪುರ್ವೆಡೊರ್ಜ್‌ರವರನ್ನು ಸೋಲಿಸಿದರು ಮತ್ತು ಪದಕದ ಪಂದ್ಯದಲ್ಲಿ ಹಾಲಿ ಏಷ್ಯನ್ ಚಾಂಪಿಯನ್, ಕಿರ್ಗಿಸ್ತಾನ್‌ದ ಐಸಿಲೊ ಟೈನಿಬೆಕೊವಾರನ್ನು ೮-೫ ರಿಂದ ಸೋಲಿಸಿ ಕಂಚಿನ ಪದಕ ಗೆದ್ದುಕೊಂಡರು ಮತ್ತು ಒಲಂಪಿಕ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಮತ್ತು ನಾಲ್ಕನೇ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಗೂ ಪಾತ್ರರಾದರು. ಪಂದ್ಯದ ಆರಂಭದಲ್ಲಿ ಸಾಕ್ಷಿ ೦-೫ರಿಂದ ಹಿನ್ನಡೆ ಅನುಭವಿಸಿದ್ದರು ಆದರೆ ನಂತರದ ಬೌಟ್ಸ್‌ನಲ್ಲಿ ಸತತ ೫ ಅಂಕ ಕಲೆಹಾಕಿದ ಸಾಕ್ಷಿ, ಎದುರಾಳಿ ಜೋಹನ್ನಾ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು ಹಾಗೂ ೨೦೧೬ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. == ದಾಂಪತ್ಯ ಜೀವನ == ಹರಿಯಾಣದ ರೋಹ್ಟಕ್-ನಲ್ಲಿ ಸಾಕ್ಷಿ ಮಲಿಕ್ ಅವರು ತಮ್ಮ ಬಾಲ್ಯದ ಸ್ನೇಹಿತ, ಅಂತರರಾಷ್ಟ್ರೀಯ ಕುಸ್ತಿಪಟು ಸತ್ಯವ್ರತ್ ಕಡಿಯಾನ್ ಅವರೊಂದಿಗೆ ಭಾನುವಾರ ವಿವಾಹವಾದರು. 2016 ಅಕ್ಟೋಬರ್‌ನಲ್ಲಿ ಅವರ ಮದುವೆ ನಿಶ್ಚಯವಾಗಿತ್ತು. == ಪ್ರಶಸ್ತಿಗಳು ಮತ್ತು ಮಾನ್ಯತೆಗಳು == ೨ ಕೋಟಿ (ಯು. ಎಸ್. ಡಿ ೩೦೦,೦೦೦) ಹರ್ಯಾಣ ಸರ್ಕಾರ, ರಾಜ್ಯದಲ್ಲಿ ಭೂಮಿ ಅನುದಾನದ ಜೊತೆಗೆ. ೫೦ ಲಕ್ಷ (ಯು. ಎಸ್. ಡಿ ೭೪೦೦೦) ಭಾರತೀಯ ರೈಲ್ವೆಯಿಂದ, ತನ್ನ ಉದ್ಯೋಗಿಗೆ. ೨೦ ಲಕ್ಷ (ಯು. ಎಸ್. ಡಿ ೩೦೦೦೦) ಭಾರತೀಯ ಒಲಿಂಪಿಕ್ ಅಸೋಸಿಯೇಷನ್. ೧೫ ಲಕ್ಷ (ಯು. ಎಸ್. ಡಿ ೨೨೦೦೦) ಜೆ. ಎಸ್. ಡಬ್ಲ್ಯೂ ಗುಂಪುನಿಂದ. ೧.೦೧ ಲಕ್ಷ (ಯು. ಎಸ್. ಡಿ ೧೫೦೦) ಸಲ್ಮಾನ್ ಖಾನ್‌ನಿಂದ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ:ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ದಿ.29 , 2016 ಸೋಮವಾರ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಪದಕ, ಪ್ರಮಾನಪತ್ರ ಹಾಗೂ ರೂ. 7.5 ಲಕ್ಷ ನಗದು ಬಹುಮಾನವನ್ನು ಒಳಗೊಂಡ ಖೇಲ್‌ ರತ್ನ ಪ್ರಶಸ್ತಿಯನ್ನು ಪ್ರಣವ್‌ ಮುಖರ್ಜಿ ಅವರಿಂದ ಕ್ರೀಡಾಪಟುಗಳು ಸ್ವೀಕರಿಸಿದರು. ಭಾರತ ಸರ್ಕಾರದಿಂದ ೨೦೧೭ರ ಸಾಲಿನ ಪದ್ಮಶ್ರೀ ಪ್ರಶಸ್ತಿ. == ನೋಡಿ == ರಿಯೊ ಒಲಿಂಪಿಕ್ಸ್ 2016ರಲ್ಲಿ ಭಾರತ ಪಿ.ವಿ. ಸಿಂಧು ದೀಪಾ ಕರ್ಮಾಕರ್ ಸಂದೀಪ್ ತೋಮರ್ (57 ಕೆಜಿ), ಯೋಗೇಶ್ವರ್ ದತ್ (65 ಕೆಜಿ) | ----- ಬೆಂಗಳೂರಿನಲ್ಲಿ ಸಂದರ್ಶನ:12 ವರ್ಷಗಳ ತಪಸ್ಸು, ಯಶಸ್ಸು...;10 , 2016 [೧] 2016-10-10 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==